ಅಂತೂ ಒಬ್ಬ ’ಗಂಡಸು’ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ. ಇಷ್ಟು ದಿನದ ’ಬೃಹನ್ನಳೆ ’ ಆಡಳಿತದಿಂದ ರೋಸಿ ಹೋಗಿರುವ ಎಲ್ಲರಿಗೂ ಒಂದು ಕೊನೆಯ ಅವಕಾಶ. ನೀವ್ಯಾಕೆ ಮೋದಿಯನ್ನೇ ಆಯ್ಕೆ ಮಾಡಬೇಕೆಂಬುವುದಕ್ಕೆ ನನ್ನ ಉತ್ತರ ಇಲ್ಲಿದೆ-
೧. ಮೊಟ್ಟ ಮೊದಲ ಕಾರಣವೆಂದರೆ, ಇವರು ’ಮಾತನಾಡಬಲ್ಲರು’. ಅದು ಯಾರೇ ಇರಲಿ, ರಾಜ್ ದೀಪ್ ಸರ್ ದೇಸಾಯಿಯಂಥವನ (ಅಂಥವನ ಅಂದರೆ ಅಂಥಾ ತಿರುಕನ) ಪ್ರಶ್ನೆಯಿಂದ ಹಿಡಿದು ತಮ್ಮ ಧರ್ಮವನ್ನು ನಂಬದವರನ್ನು ಕೊಚ್ಚಿರಿ, ಕೊಲ್ಲಿರಿ ಎಂಬ ತಲೆ ಮಾಸಿದವರ ಸವಾಲಿಗೂ, ಸಮಾನತೆಯನ್ನು ತರುತ್ತೇವೆಂದು ಬಾಯಿಯಲ್ಲಿ ಪುಂಗಿ ಊದುತ್ತಾ ಕೈಯ್ಯಲ್ಲಿ ಬಂದೂಕಿನ ನಳಿಕೆ ಹಿಡಿದು ಅಮಾಯಕರನ್ನು ಕೊಲ್ಲುವ ಮಾನವೀಯತೆಯನ್ನೇ ಮರೆತು ಭಾರತವನ್ನು ರಶ್ಯಾ ಮಾಡಲು ಹೊರಟ ಶೂನ್ಯವಾದಿಗಳ ರಾಕ್ಷಸೀತನದಿಂದ ಹಿಡಿದು, ಸರಕಾರದ ಸೌಲಭ್ಯಗಳನ್ನು ಪುಕ್ಕಟೆ ಅನುಭವಿಸುತ್ತಾ ಭಾರತಾಂಬೆಯ ಸೆರಗಿನಲ್ಲಿ ಬೆಚ್ಚಗಿನ ಆಶ್ರಯ ಪಡೆದೂ ಇಲ್ಲಿನ ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನೆಲ್ಲ ಬಾಯಿಗೆ ಬಂದವರಂತೆ ಆಡಿಕೊಳ್ಳುವ ವಿದೇಶೀ ಹಣವನ್ನು ಪಡೆದು ಬುದ್ಧಿ ಜೀವಿಗಳೆಂಬ ಪಟ್ಟ ಪಡೆಯುವ ನಪುಂಸಕರ ಎಲ್ಲ ಪ್ರಶ್ನೆಗಳಿಗೂ ದಿಟ್ಟವಾಗಿ ಉತ್ತರಿಸಬಲ್ಲ ಏಕೈಕ ನಾಯಕರು ಇವರು. ಅಂದ ಹಾಗೆ ಸತ್ಯವನ್ನು ’ಮಾತನಾಡುವುದಕ್ಕೂ’ ಎದೆಗಾರಿಕೆ ಬೇಕು ಹಾಂ... ಅಂಥ ಎದೆಗಾರಿಕೆ ಇರುವುದರಿಂದ ಇವರು ವಿಚಾರವಂತರ ಅನಿವಾರ್ಯ ಆಯ್ಕೆಯಾಗುತ್ತಾರೆ.
೨. ಎರಡನೆಯ ಕಾರಣವೆಂದರೆ ಇವರು ಹೇಡಿಯಲ್ಲ ಎಂಬುದು. ಇಷ್ಟು ದಿನ ಭಾರತ ಮಾತೆ (ವಾಜಪೇಯಿಯವರನ್ನು ಹೊರತುಪಡಿಸಿ) ದಿಟ್ಟ ಎಂಬಂಥ ಯಾವ ನಾಯಕನನ್ನೂ ಕಾಣಲಿಲ್ಲ. ಈಗ್ಗೆ ಹತ್ತು ವರ್ಷಗಳಿಂದಂತೂ ನಾವೆಲ್ಲ ಬೇರೆ ದೇಶದವರು ಹೇಳಿದ್ದನ್ನೆಲ್ಲ ಹೇಳಿಸಿಕೊಂಡು, ಬಾಂಬ್ ಹಾಕಿ ನಮ್ಮ ಜನರನ್ನು ಕೊಂದರೂ ಎಲ್ಲವನ್ನೂ ಮುದುರಿಕೊಂಡು ಕುಳಿತು ಏನೂ ಮಾಡಲಾಗದ ನಪುಂಸಕರಂತೆ ಎಲ್ಲ ದೇಶಗಳ ದೃಷ್ಟಿಯಲ್ಲಿ ಬಿಂಬಿತವಾಗಿಬಿಟ್ಟೆವು. ಆದರೆ ಇನ್ನು ಮುಂದೆ ನಿಮ್ಮೊಳಗಿನ ದೇಶಪ್ರೇಮವನ್ನು ದಿಟ್ಟವಾಗಿ ಪ್ರತಿನಿಧಿಸುವ, ಶತ್ರುಗಳನ್ನು ಮಟ್ಟ ಹಾಕಬಲ್ಲ ಒಬ್ಬ ಸೇನಾನಿ ಆ ಪಟ್ಟ ಏರಲು ಮುಂದೆ ಬಂದಿದ್ದಾನೆ. ಸೆರಗಿನ ಹಿಂದೆ ಅಡಗಿ ಕುಳಿತುಕೊಳ್ಳುವ ಪಾರ್ಥೇನಿಯಮ್ ಜನಕ್ಕಿಂತ ದೇಶದ ಹಿತ ಕಾಯುವ ಇವರನ್ನು ನೀವು ಆಯ್ಕೆ ಮಾಡದಿದ್ದರೆ ವಿಚಾರವಂತರಾದ ಯಾರಿಗೂ ಆತ್ಮಸಾಕ್ಷಿ ಮೆಚ್ಚುವುದಿಲ್ಲ ಎಂಬ ನಂಬಿಕೆ ನನ್ನದು.
೩. ಮೂರನೆಯ ಅಂಶವೆಂದರೆ ಇವರು ಪರಾವಲಂಬಿಯಲ್ಲ. ಇಷ್ಟು ದಿನ ಯಾವ ನಿರ್ಣಯ ತೆಗೆದುಕೊಳ್ಳುವುದಿದ್ದರೂ ಮೇಡಮ್ ಅವರ ಅಪ್ಪಣೆ ಪಡೆಯಬೇಕಿತ್ತು. ಆ ಮೇಡಮ್ ಆದರೋ, ಅವರಾಯಿತು ಅವರ ದೊಡ್ಡ ರೋಗವಾಯಿತು. ನನಗೆ ಬಂದಿರುವ ದೊಡ್ಡ ರೋಗಕ್ಕಿಂತ ದೇಶಕ್ಕೆ ಬಡಿದಿರುವ ವ್ಯಾಧಿಯೇ ನಿಮಗೆ ಹೆಚ್ಚಾಯಿತೇ ಎಂಬಂತೆ ಬಿರುಗಣ್ಣಿಂದ ನೋಡಿ ಇಲ್ಲಿಯವರೆಗೆ ನಮ್ಮ ಪುಕ್ಕಲು ಸಿಂಹದ ಬಾಲ ಮುದುರಿಸಿದ್ದೇ ಆಯಿತು. ಆದರೆ ಇನ್ನು ಮುಂದೆ ಹಾಗೆ ನೀವು ವಿದೇಶೀ ಮೂರ್ಖರ ಅಡಿಯಾಳಾಗಬೇಕಾದದ್ದಿಲ್ಲ. ಸ್ವದೇಶೀ ಪ್ರತಿಭೆಗೆ ಒಮ್ಮೆ ಅವಕಾಶ ಕೊಟ್ಟು ನೋಡುವುದಕ್ಕಾದರೂ ನಿಮಗಿವರು ಅನಿವಾರ್ಯ ಆಯ್ಕೆಯಾಗುತ್ತಾರೆ.
೪. ಇವರು ನಮ್ಮ ದೇಶದಲ್ಲೇ ಹುಟ್ಟಿ, ಭಾರತ ಮಾತೆಯ ಪುತ್ರರೇ ಆಗಿರುವುದರಿಂದ ಎಲ್ಲ ಹಣ, ಲಾಭಗಳೆಲ್ಲ ಭಾರತಕ್ಕೇ ಲಭಿಸುವುದು ಗ್ಯಾರಂಟೀ. ಇಷ್ಟು ದಿನ ಮತ್ಯಾವುದೋ ದೇಶವನ್ನು ನಾವು ಶ್ರೀಮಂತಗೊಳಿಸಿದ್ದು ಸಾಕು ಎಂಬ ಭಾವನೆ ನಿಮಗಿದ್ದಲ್ಲಿ ಮತ್ತೆ ಇವರೊಬ್ಬರೇ ನಿಮಗಿರುವ ಆಯ್ಕೆ.
೫. ಇನ್ನು ನಿಮಗೆ ಭಾರತವನ್ನು ಸಾಲಮುಕ್ತವನ್ನಾಗಿಸುವ, ಅಮೇರಿಕಾದಂಥ ರಾಷ್ಟ್ರಗಳಿಗೂ ಸೆಡ್ಡು ಹೊಡೆಯುವಂತೆ ಭಾರತವನ್ನು ಪ್ರಪಂಚದೆದುರು ನಿಲ್ಲಿಸುವ ಛಾತಿಯ ಮತ್ತು ಆ ಎಲ್ಲ ಯೋಜನೆಗಳ ನೀಲನಕ್ಷೆಯನ್ನು ಹೊಂದಿರುವ ಅಭ್ಯರ್ಥಿ ಬೇಕಿದ್ದರೂ ಇವರೇ ನಿಮ್ಮ ಕಟ್ಟಕಡೆಯ ದಿಕ್ಕು
೬. ಹಾಂ... ಮತ್ತೊಂದು ಪ್ರಮುಖ ಅಂಶವೆಂದರೆ ಇವರು ಅವಿವಾಹಿತರು. ಇವರಿಗೆ ಹೆಂಡತಿಯಿಲ್ಲ. ಹಾಗಾಗಿಯೇ ಮಕ್ಕಳಿಲ್ಲ. ಅಳಿಯನಿಲ್ಲ. ಸೋ, ಮಕ್ಕಳು ಅಳಿಯಂದಿರ ಸಲುವಾಗಿ ಕೋಟ್ಯಂತರ ರೂಪಾಯಿಯ ಅಕ್ರಮ ಆಸ್ತಿ ಮಾಡಿಕೊಳ್ಳಬೇಕಾದ ದರ್ದು ಕೂಡ ಇವರಿಗಿಲ್ಲ. ನೆನಪಿರಲಿ. ಕಳೆದ ಹತ್ತು ವರ್ಷಗಳಿಂದ ಅಮ್ಮ ಮಗ ಅಳಿಯ ಈ ಥ್ರೀ ಈಡಿಯಟ್ಸ್ ನಿಂದಲೇ ದೇಶದ ಬೊಕ್ಕಸ ಬರಿದಾಗಿದ್ದು.
೭. ಇವರ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಕಳಂಕ ಕೂಡ ಇವರಿಗಿಲ್ಲ.ನೀವು ಭ್ರಷ್ಟಾಚಾರದ ವಿರೋಧಗಳೆಂದಾದರೆ ಖಂಡಿತ ನಿಮಗಿವರು ಸ್ನೇಹಿತರಾಗುತ್ತಾರೆ
೮. ಭಾರತದ ಗಡಿಗಳನ್ನು ಚೂರು ಚೂರೇ ಬಿಟ್ಟುಕೊಡುತ್ತಾ ಭಾರತವನ್ನೇ ಇಲ್ಲವಾಗಿಸುವತ್ತ ಹೊರಟಿರುವ ಈಗಿನ ಸರ್ಕಾರದ ಶಂಡತನದಿಂದ ನೀವು ಬೇಸತ್ತಿರುವಿರಾದರೆ ಅಕ್ಕಪಕ್ಕದವರ ಕಣ್ಣಾಮುಚ್ಚಾಲೆಯನ್ನೆಲ್ಲಾ ನಿಲ್ಲಿಸಬಲ್ಲ ಒಬ್ಬ ಗಂಡಸಿಗಾಗಿ ನೀವು ಹುಡುಕುತ್ತಿರುವಿರಾದರೆ ಮುಂದಿನ ಚುನಾವಣೆಯಲ್ಲಿ ಅವರಿಗಲ್ಲದೇ ಬೇರೆ ಯಾರು ತಾನೇ ನಿಮಗೆ ಕಾಣಿಸಿಯಾರು?
೯. ಅಂದ ಹಾಗೆ ಇವರು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದವರಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಪವಡಿಸಿ, ನಿದ್ರಿಸುವವರೂ ಅಲ್ಲ. ನೆಲದ ಮಣ್ಣಿಂದ ಎದ್ದು ಬಂದ ಅಪ್ಪಟ ಶ್ರಮಿಕ ವರ್ಗದವರು ಇವರು. ಇವರ ರಾಜ್ಯದ ಕೃಷಿಯಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ನೋಡಿದರೂ ಇವರ ಸಾಧನೆ ಅರ್ಥವಾಗಬಲ್ಲದು. ನಮ್ಮ ನಿಮ್ಮೆಲ್ಲರ ಹೊಟ್ಟೆ ತಣ್ಣಗಾಗಿಸುವ ರೈತನೆಂಬ ದೇವತೆಯ ಕೈಗೆ ಸತ್ವ ನೀಡಬೇಕಾದ ಒಬ್ಬ ಸಾತ್ವಿಕ ಬೇಕೆಂದರೂ ಇವರೊಬ್ಬರೇ ನಿಮಗಿರುವ ಆಯ್ಕೆ.
೧೦. ಒಬ್ಬ ವಾಗ್ಮಿ, ಒಬ್ಬ ಕ್ರಿಯಾಶೀಲ, ಎಲ್ಲ ವಿಷಯಗಳಲ್ಲಿ ಸ್ಪಷ್ಟತೆ ಹಾಗೂ ತನ್ನದೇ ಆದ ಸ್ವಂತಿಕೆಯ ಬಲವುಳ್ಳ, ವಿವೇಕಾನಂದರನ್ನು ಆದರ್ಶ ವ್ಯಕ್ತಿಯನ್ನಾಗಿ ಹೊಂದಿರುವ, ಹಿರಿಯರಲ್ಲಿ ಗೌರವ, ಭಾರತೀಯತೆಯ ಬಗೆಗಿನ ಶೃದ್ಧೆ, ನೇರ ನಡೆ ನುಡಿ ಸೇರಿದಂತೆ.....ಇನ್ನೂ ಹಲವಾರು ಗುಣಗಳನ್ನು ಹೊಂದಿರುವ ನರೇಂದ್ರ ಮೋದಿಯನ್ನು ಇಷ್ಟಪಡಲು ಎಷ್ಟೊಂದು ಕಾರಣಗಳು ಸಿಗುತ್ತವೆ. ಯೋಚಿಸಿ. ಅವರನ್ನು ದ್ವೇಷಿಸಲು ನಿಮಗೆ ಸಿಗುವ ಸ್ಪಷ್ಟ ಕಾರಣಗಳೆಷ್ಟು? ಇನ್ನೂ ಕೋರ್ಟಿನಲ್ಲಿರುವ ಆ ಗಲಭೆಯೊಂದೇ ಅಲ್ಲವೇ? ಅದರಾಚೆ ಮತ್ತೇನಾದರೂ ಹೊಳದರೆ ಹೇಳಿ.ಮೇಲಿನ ಎಲ್ಲ ವಿಷಯಗಳನ್ನೂ ’ವಿಚಾರವಂತರು’ ಒಪ್ಪುತ್ತಾರೆ ಎಂಬ ನಂಬಿಕೆ ನನ್ನದು. ತೆಗಳುವುದಕ್ಕಾಗಿಯೇ ತೆಗಳುವವರಿಗೆ ಸ್ವರ್ಗ ಹಾಳಾಗುವುದಿಲ್ಲ...By
Brahmin Shrinivas
No comments:
Post a Comment