Tuesday, September 10, 2013

ಪ್ರೀತಿಸು (LOVE)

ಬದುಕಿನಲ್ಲಿ ಏನೆಲ್ಲವನು ಕಂಡೆ. ಏನೆಲ್ಲವನು ಅನುಭವಿಸಿದೆ. ಇಷ್ಟೆಲ್ಲಾ ದಿನಗಳನ್ನು ಈ ಭೂಮಿಯ ಮೇಲೆ ಕಳೆದ ಮೇಲೆ ಅನಿಸಿದ್ದು ಇಷ್ಟೆ. ಪ್ರೀತಿಸು. ಮನಸಾರೆ ಪ್ರೀತಿಸು. ಪ್ರೀತಿ ಅನ್ನೋದು ಒಂದು ವ್ಯಕ್ತಿಗೆ ಮೀಸಲಲ್ಲ. ನಿನಗೆ ಇಷ್ಟ ಬಂದುದನ್ನೆಲ್ಲ ಪ್ರೀತಿಸು. ಹಾಗೆ ಯಾವತ್ತಿಗೂ ನೀನು ಖುಷಿಯಾಗಿರು. ಯಾವುದಕ್ಕೂ ಆತುರಬೇಡ. ಅವಸರಬೇಡ. ಎಲ್ಲವೂ ತಾನಾಗೆ ನಿನ್ನ ಬಳಿಗೆ ಬಂದು ಬೀಳುತ್ತದೆ. ಅದಕ್ಕೆ ಸ್ವಲ್ಪ ಸಹನೆ ಬೆಳೆಸಿಕೋ. ಯಾವ ಕಾಲದಲ್ಲಿ ಏನಾಗಬೇಕೋ ಅದೇ ಆಗುತ್ತದೆ. ಯಾರೋ ಯಾವುದೋ ಕಾರಣಕ್ಕೆ ನಿನ್ನನ್ನು ಇಷ್ಟಪಡಲು ಶುರು ಮಾಡ್ತಾರೆ. ಅವರ ಪ್ರೀತಿಯನ್ನು ಸವಿಯಲು ಕಲಿ. ಯಾವಾಗಲು ನೀನು ದೇವರಿಗೆ ಹಾಗು ನಿನ್ನನ್ನು ಪ್ರೀತಿಸುವ, ಗೌರವಿಸುವ ಹೃದಯಗಳಿಗೆ ಅಭಾರಿಯಾಗಿರು. ಅವರನ್ನು ವಂದಿಸು. ಬದುಕಿನಲ್ಲಿ ಒಳ್ಳೆಯ ರೀತಿಯಲ್ಲಿ ಬದುಕುವುದಕ್ಕಿಂತ ಮತ್ತೊಂದು ಸುಖವಿಲ್ಲ. ನಿನ್ನನ್ನು ಯಾರೋ ಯಾವುದೋ ಕಾರಣಕ್ಕೆ ಕೆಲವು ಸಲ ದ್ವೇಷಿಸಲು ಇಚ್ಚಿಸುತ್ತಾರೆ. ಅವರು ನಿನ್ನನ್ನು ದ್ವೇಷಿಸಲು ಬಿಡು. ಒಂದಲ್ಲ ಒಂದು ದಿನ ಅವರೂ ನಿನ್ನನ್ನು ಪ್ರೀತಿಸಲು ಶುರು ಮಾಡ್ತಾರೆ. ಆ ದಿನಕ್ಕಾಗಿ ಸುಮ್ಮನೆ ಕಾಯುತ್ತಿರು.



No comments:

Post a Comment