Tuesday, July 23, 2013

Kuduremukha

Kuduremukha is a mountain range and name of a peak located inChikkamagaluru district, in Karnataka,India. It is also the name of a small hill station cum mining town situated near the mountain, about 48 kilometres fromKarkala and about 20 kilometres fromKalasa. The name Kuduremukha literally means 'horse-face' (in the local language Kannada) and refers to a particular picturesque view of a side of the mountain that resembles a horse's face. It was also referred to as 'Samseparvata', historically since it was approached from Samse village. The nearest airport is Mangalore International Airport at Mangalore which is at distance of 130 Kilometres.....


ಹನುಮಾನ್‌ ಗುಂಡಿ(ಸೂತನಬ್ಬಿ)ಪಶ್ಚಿಮ ಘಟ್ಟದ 'ಕುದುರೆ ಮುಖ'. ಅಭಯಾರಣ್ಯದ ವನಸಿರಿಯ ಮಧ್ಯೆ ಕಂಗೊಳಿಸುವ, ಕಣ್ಮನ ಮುದಗೊಳಿಸುವ ನೂರಾರು ರಮಣೀಯ ಜಲಧಾರೆಗಳಲ್ಲಿ ಒಂದು. ತುಂಗಾ ನದಿಯು ಸೃಷ್ಟಿಸಿರುವ ಈ ಜಲಪಾತ "ಭದ್ರಾ ಅಭಯಾರಣ್ಯ " ವ್ಯಾಪ್ತಿಯಲ್ಲಿ ಬರುತ್ತದೆ. ಹನುಮಾನ್‌ ಗುಂಡಿ ಎನ್ನುವುದು ಜಲಪಾತದ ಹೆಸರಲ್ಲ ಅದು ಜಲಪಾತ ಇರುವ ಜಾಗದ ಹೆಸರು. ಈ ಜಲಪಾತವನ್ನು "ಸೂತನಬ್ಬಿ' ಎಂದು ಕರೆಯುತ್ತಾರೆ. ಆದರೆ ಇಂದು ಇದು "ಹನುಮಾನ್‌ ಗುಂಡಿ' ಜಲಪಾತ ಎಂದೇ ಪ್ರಸಿದ್ಧಿ ಪಡೆದಿದೆ. ಪಶ್ಚಿಮ ಘಟ್ಟದಲ್ಲಿ ಬಹುದೂರದವರೆಗೆ ಸುತ್ತಿಕೊಂಡು ಹರಿದು ಈ ಜಲಪಾತ ಸೃಷ್ಟಿಯಾಗುವುದರಿಂದ ಇದಕ್ಕೆ "ಸೂತನಬ್ಬಿ' ಎಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು.ಹನುಮಾನ್‌ ಗುಂಡಿ ಎಂಬ ಹೆಸರಿನ ಬಗ್ಗೆ ಸ್ಥಳೀಯರು ಕಾಲ್ಪನಿಕಕತೆಯೊಂದನ್ನು ಹೇಳುತ್ತಾರೆ. ಹಿಂದೆ ಹನುಮಂತನು ಈ ದಾರಿಯಾಗಿ ಹಾರಿ ಹೋಗುವಾಗ ಇಲ್ಲಿ ತನ್ನ ಕಾಲನ್ನು ಇರಿಸಿದ್ದ. ಇದರಿಂದ ಗುಂಡಿ ಸೃಷ್ಟಿಯಾಗಿದೆ. ಹಾಗಾಗಿ "ಹನುಮಾನ್‌ ಗುಂಡಿ' ಎಂಬ ಹೆಸರು ಬಂತು.

ಹೋಗುವ ದಾರಿ

ಕಾರ್ಕಳದ ಬಜಗೋಳಿ ಯಿಂದ ಅರಣ್ಯ ಇಲಾಖೆಯವರ ಒಪ್ಪಿಗೆ ಪಡೆದು (ಮೀಸಲು ಅರಣ್ಯ ಪ್ರದೇಶವಾದುದರಿಂದ ಅರಣ್ಯ ಇಲಾಖೆಯ ಒಪ್ಪಿಗೆ ಕಡ್ಡಾಯ) ಕುದುರೆಮುಖ ಮಾರ್ಗವಾಗಿ ಎಸ್‌ಕೆ ಬಾರ್ಡರ್‌ (ಸೌತ್‌ ಕೆನರಾ ಬಾರ್ಡರ್‌-ಈಗ ಉಡುಪಿ) ಮೂಲಕ ನೇರ ಮುಂದಕ್ಕೆ ಸಾಗಬೇಕು. ಹೀಗೆ ದಟ್ಟ ಅರಣ್ಯದ ಮಧ್ಯೆ ಸಾಗುವ ವೇಳೆ ರಸ್ತೆಯ ಎಡಬದಿಯಲ್ಲಿ ಹನುಮಾನ್‌ ಗುಂಡಿ ಜಲಪಾತ ಕಾಣಸಿಗುತ್ತದೆ. ಅಲ್ಲಿ ಅರಣ್ಯ ಇಲಾಖೆಯವರ ಟಿಕೆಟ್‌ ಕೌಂಟರ್‌ ಇದೆ. ಆದರೆ ಅಲ್ಲಿ ರಸ್ತೆ ಬದಿಗೆ ಜಲಪಾತ ಕಾಣಿಸುವುದಿಲ್ಲ. ಬದಲಾಗಿ ನೀರು ಧುಮುಕುವ ಶಬ್ದ ಮಾತ್ರ ಕೇಳಿಸುತ್ತದೆ.ಹನುಮಾನ್‌ ಗುಂಡಿಯ ಸುತ್ತಲೂ ದಟ್ಟ ಅರಣ್ಯ ಇರುವುದರಿಂದ ಮಳೆಗಾಲದಲ್ಲಿ ಅಲ್ಲಿಗೆ ತೆರ ಳುವುದು ಸ್ವಲ್ಪ ಕಷ್ಟ. ಯಾಕೆಂದರೆ ಮಳೆಗಾಲದಲ್ಲಿ ಅಲ್ಲಿ ಜಿಗಣೆ (ಉಂಬುಳ) ಎನ್ನುವ ರಕ್ತ ಹೀರುವ ಹುಳದ ಉಪಟಳ ಹೆಚ್ಚು. ಅಲ್ಲದೆ ಮಳೆ ಜೋರಾಗಿ ಇರುವುದರಿಂದ ಮೆಟ್ಟಲುಗಳು ಜಾರುತ್ತಿರುತ್ತವೆ. ಜಲಪಾತ ವೀಕ್ಷಣೆಗೆ ಅವಕಾಶ ಪ್ರತಿದಿನ ಬೆಳಗ್ಗೆ ೯ರಿಂದ ಸಂಜೆ ೫ ಗಂಟೆ ವರೆಗೆ ಮಾತ್ರ.ಅಲ್ಲಿಂದ ಅರಣ್ಯ ಇಲಾಖೆಯವರು ನಿರ್ಮಿಸಿದ ಸಿಮೆಂಟಿನ ಸುಮಾರು ೩೦೦ ಮೆಟ್ಟಲುಗಳ ಮೂಲ ಕ ಇಳಿಯುತ್ತಿದ್ದಂತೆ ಹಾಲಿನ ಹೊಳೆಯಂತೆ ೨೨ ಮೀ. ಎತ್ತರದಿಂದ ಧುಮುಕುವ ನಯನ ಮನೋಹರ ಜಲಪಾತ ಕಾಣಸಿಗುವುದು. ಸಮುದ್ರ ಮಟ್ಟದಿಂದ ೭೩೨ ಮೀ. ಎತ್ತರದಲ್ಲಿದೆ ಈ ಜಲಪಾತ."ನಮನ"

Sunday, July 14, 2013

Agumbe rainy days...

Agumbe is one of the most scenic places on the Western Ghats of the Southern  India. Added to the lush green view all around, the attractions for the visitors is the spectacular sunset and vast opportunities it offers to the trekkers.If you are looking for a peaceful break for a few days from the hectic city life, away from the crowded and commercialized attractions, then this is the place for you.Agumbe is among the places that receive high rainfall and is rightly called the Cherrapunji of South India.


ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಒಂದು ಊರು. ಪಶ್ಚಿಮ ಘಟ್ಟದಲ್ಲಿರುವ ಈ ಊರು ಒಂದು ಪ್ರವಾಸಿ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದಲ್ಲಿ ಸೂರ್ಯಾಸ್ತದ ದೃಶ್ಯ,ವನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಆಕಾಶ ನಿರ್ಮಲವಾಗಿರುವುದರಿಂದ, ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ. ಆದರೆ ಮಳೆಯೇ ಮಲೆನಾಡಿನ ಜೀವಾಳ. ಮಳೆಗಾಲದಲ್ಲಿ ಕಾದಿದ್ದು, ಸೂರ್ಯಾಸ್ತವನ್ನು ಕಾಣುವುದೇ ಒಂದು ಸಡಗರದ ಸನ್ನಿವೇಶ.ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಗಿಯೆ ಆಗುಂಬೆಯನ್ನು "ದಕ್ಷಿಣದ ಚಿರಾಪುಂಜಿ" ಎಂದೂ ಕರೆಯುತ್ತಾರೆ. ಭಾರತದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನ ಕೇಂದ್ರ ಆಗುಂಬೆಯಲ್ಲಿದೆ. ಹೆಸರುವಾಸಿ ಉರಗತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು "ಕಾಳಿಂಗ ಸರ್ಪಗಳ ರಾಜಧಾನಿ" ಎಂದು ಕರೆದಿದ್ದಾರೆ.೨೦೦೫ ನಿಂದೀಚೆಗೆ ಆಗುಂಬೆಯಲ್ಲಿ ನಕ್ಸಲ್ ಚಟುವಟಿಕೆ ಶುರುವಾಗಿದೆಯಾದರೂ ಬರುವ ಪ್ರವಾಸಿಗಳು ಕಡಿಮೆಯೇನಾಗಿಲ್ಲ.

Friday, July 12, 2013