Sunday, October 13, 2013

Tyavarekoppa Lion and Tiger Safari

Tyavarekoppa Lion and Tiger Safari is a beautiful
and popular nature and wildlife destination
located at a distance of 10 Km from Shimoga on
Shimoga - Sagar road.
Tyavarekoppa Lion and Tiger Safari is an ideal
picnic spot where you can see animals roaming in
the deep forest without any fear. The Tiger - Lion
safari started here in the year 1998. The safari is
spread around 200 hectares in the thick forest.
At Tyavarekoppa Lion and Tiger Safari, you can
actually witness to the grace, variety, color as
well as wonder of nature world plus catch bracing
glimpses of Tigers, Lions, Leopards, Sloth Bear,
Deer, and occasional wandering birds since they
wander around in luxuriant surroundings.
There is a well maintained small zoo and a
children park is maintained in the zoo for the
children to enjoy.
Recreation and Sightseeing for visitors are
organized regularly by the forest department. The
safari can be best enjoyed in the jeep safaris
conducted by the forest department.


Friday, October 4, 2013

ಅನಾಮಿಕಾ

"A rose by any other name would smell as sweet" ಅಂತ ಶೇಕ್ ಸ್ಪಿಯರ್ ರೋಮಿಯೋ ಜೂಲಿಯಟ್ ನಲ್ಲಿ ಹೇಳಿದ್ದನಂತೆ ,ಅದನ್ನೆ ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿದ್ದಾರೆ ಕೆಲವು ಜನಗಳು! ಶೇಕ್ ಸ್ಪಿಯರ್ ಏನೋ ಮಾತಿಗೆ ಆ ರೀತಿ ಬರೆದಿರಬಹುದು ,ಆದ್ರೆ ನಿಜ ಜೀವನದಲ್ಲಿ ಅವನೇನಾದ್ರೂ ಹೆಸರಿಗೆ ಅಷ್ಟು ಪ್ರಾಮುಖ್ಯತೆ ಕೊಡದೇ ಹೋಗಿದ್ರೆ ,ಅವನು ಬರೆದ ಎಷ್ಟೊ ನಾಟಕಗಳನ್ನು ಬೇರೆಯವರು ತಮ್ಮದಾಗಿಸ್ತಿದ್ರೇನೋ ?ಹೊಸದಾಗಿ ಇಂಟರ್ನೆಟ್ ಲೋಕಕ್ಕೆ ಪರಿಚಯವಾದಾಗ ಹೀಗೆ ಸಮಯ ಕಳೆಯಲು ಚಾಟ್ ರೂಮ್ ಗೆ ಎಡತಾಕುವ ಅಭ್ಯಾಸ ಇತ್ತು.ಎಲ್ಲರೂ ಮಾಮೂಲಾಗೇ ಕೇಳುವ ಪ್ರಶ್ನೆ ಹೆಸರೇನು(Age Sex Location),ಎಲ್ಲಿರೋದು ಇತ್ಯಾದಿ.ಇಂಟರ್ನೆಟ್ ನಲ್ಲಿ ಅಷ್ಟು ಸುಲಭವಾಗಿ ನಮ್ಮ ಪರಿಚಯ ಮಾಡ್ಕೋಬಾರದು ಅನ್ನೋ ಅರಿವು ಬಹಳಷ್ಟು ಜನರಿಗೆ ಇದ್ದುದರಿಂದ ಯಾರೂ ಈ ಪ್ರಶ್ನೆ ಗೆ ನಿಜ ಉತ್ತರ ನೀಡ್ತಾ ಇರ್ಲಿಲ್ಲ.ಆಗ ಬಹಳಷ್ಟು ಜನರ ನೆರವಿಗೆ ಬರ್ತಾ ಇದ್ದಿದ್ದೇ ಶೇಕ್ ಸ್ಪಿಯರ್ ನ ಈ ವಾಕ್ಯ "A rose by any other name would smell as sweet" . ಹೆಸರ್ಲ್ಲೇನಿದೆ ??? !!! ಅಂತ.ಆದ್ರೆ ರೋಸ್ ಅನ್ನೋದೇ ಒಂದು identity ಅಲ್ವ? ರೋಸ್ ನ ಜಾಸ್ಮಿನ್ ಅಂತ ಕರೆದಿದ್ರೆ ಅದೇ ಸುವಾಸನೆ ಇರುತ್ತೇನೋ ಆದ್ರೆ ಆ ಆಪ್ಯಾಯಮಾನತೆ??ನನ್ನ ಗೆಳತಿಯೊಬ್ಬಳು ಹೀಗೆ ಇಂಟರ್ನೆಟ್ ನಲ್ಲಿ ಪರಿಚಯ ಆಗಿದ್ಲು ನಂಗೆ .ಮಾಯಾ ಅನ್ನೋ ಹೆಸರಲ್ಲಿ ಅವಳು ಚಾಟ್ ಮಾಡ್ತಾ ಇದ್ಲು .ಅವಳ ನಿಜ ಹೆಸರೂ ಅದೇ ಅಂತ ಹೇಳಿದ್ಲು. ಆದ್ರೆ ಸುಮಾರು ಒಂದು ವರ್ಷದ ನಂತರ 'ಸಂದೀಪ್ ಸಾರಿ ಕಣೋ ನನ್ನ ಹೆಸರು ಮಾಯಾ ಅಲ್ಲ ರಶ್ಮಿ ’ಅಂದ್ಲು!!!!ಸಕ್ಕತ್ ಬೇಜಾರಾಗಿತ್ತು ಆ ದಿನ :(ಎಷ್ಟು ಕಷ್ಟ ಅಲ್ವ ಒಂದು identity ನ ಭಿನ್ನವಾಗಿ ನೋಡೋದಕ್ಕೆ??ಒಂದು ಹೆಸರು,ವ್ಯಕ್ತಿ ಯ ಬಗ್ಗೆ ಏನೇನೋ ಕಲ್ಪನೆ ಇರುತ್ತೆ .ಅದನ್ನು ಸಡನ್ ಆಗಿ ಬದಲಾಯಿಸೋದು ತುಂಬಾ ಕಷ್ಟ . ಹೇಳೊದೇನೋ ಹೇಳಿ ಬಿಡ್ತಾರೆ ಹೆಸರಲ್ಲೇನಿದೆ ಮಣ್ಣಾಂಗಟ್ಟಿ ಅಂತ -ಆದ್ರೆ ಅದೇ ವ್ಯಕ್ತಿಯ ಹೆಸರು ಬಿಡಿ, initial ತಪ್ಪಾಗಿ ಹೇಳಿದ್ರೂ ದುರುಗುಟ್ಟಿ ನೋಡ್ತಾರೆ.VVS Laxman ನ ಬದಲು PVS Laxman ಅಂತೇನಾದ್ರೂ ಅಪ್ಪಿ ತಪ್ಪಿ ಕರೆದ್ರೋ ನಿಮ್ಮ ತಿಥಿ ಗ್ಯಾರಂಟಿ!ನನ್ನ ಬ್ಲಾಗ್ ಗೆ ಪ್ರತಿಕ್ರಿಯಿಸುತ್ತ ಒಬ್ಬರು "ಸಂದೀಪ್ ನಾಯಕ್ರೇ ಚೆನ್ನಾಗಿ ಬರೆದಿದ್ದೀರ " ಅಂದಿದ್ರು .ಇರ್ಲಿ ಪರ್ವಾಗಿಲ್ಲ ತಪ್ಪಿ ಬರೆದಿದ್ದಾರೆ ಅಂತ ನಂಗೇ ನಾನೇ ಸಮಾಧಾನ ಮಾಡ್ಕೊಂಡ್ರೂ ಮನಸ್ಸು ಒಪ್ಪಲಿಲ್ಲ -ಹೇಳಿಯೇ ಬಿಟ್ಟೆ ’ ಮ್ಯಾಡಂ ನನ್ನ ಸರ್ ನೇಮ್ ಕಾಮತ್ ನಾಯಕ್ ಅಲ್ಲ ’ ಅಂತ! ಸರ್ ನೇಮ್ ತಪ್ಪಾಗಿ ಹೇಳೋದು ಬಿಡಿ Kamath ನ Kamat ಅಂತ ಬರೆದ್ರೂ ಮೈ ಎಲ್ಲಾ ಉರಿಯುತ್ತೆ ನಂಗೆ! ’ಅದು ಹೋಟೇಲ್ ಕಾಮತ್ ಕಣ್ರಿ ನಮ್ಮದು ಬೇರೆ ಅಂತೀನಿ’ !ಇಷ್ಟೆಲ್ಲ ಯಾಕೆ ಬರೆದೆ ಅಂದ್ರೆ ಈಗಿಗ ಬ್ಲಾಗಿಗರೂ ಅನಾಮಿಕರಾಗತೊಡಗಿದ್ದಾರೆ! .ಕೆಲವು ಬ್ಲಾಗಿಗರು ’ಅನಾಮಿಕ’ರಾಗೇ ಇರಲು ಬಯಸ್ತಾರಂತೆ! ನಾವು ’ಇದು ಯಾರಿರಬಹುದು ,ಹುಡುಗ ನಾ ಹುಡುಗಿ ನಾ ’ ಅಂತೆಲ್ಲ ತಲೆ ಕೆಡಿಸ್ಕೊಂಡ್ರೇನೆ ಅವರಿಗೆ ಸಮಾಧಾನವೇನೋ . ಅಥವಾ ಇದೂ ಒಂದು ಮಾರ್ಕೆಟಿಂಗ್ strategy ನಾ??ಎಷ್ಟು ದಿನ ಅಂತ ಅನಾಮಿಕರಾಗಿ ಇರಲು ಸಾಧ್ಯ ಅಲ್ವೇನ್ರಿ?ದಿನದಿಂದ ದಿನಕ್ಕೆ ಬ್ಲಾಗ್ ವಿಸಿಟಿಗರ ಸಂಖ್ಯೆ ಜಾಸ್ತಿ ಆದ್ರೆ , ಪಕ್ಕದಲ್ಲೇ ಯಾರಾದ್ರೂ ಅವರ ಬಗ್ಗೆ ’ಎಷ್ಟು ಚೆನ್ನಾಗಿ ಬರೀತಾನ್ರಿ/ಳ್ರಿ ಇವನು/ಳು ಅಂತ ಹೇಳ್ತಾ ಇದ್ರೆ ’ಅದು ನಾನೇ ಕಣ್ರೋ ! ’ ಅಂತ ಹೇಳಲಾರದ ಪರಿಸ್ಥಿತಿ!ಉಫ್ ನಂಗಂತೂ ಸಾಧ್ಯಾನೇ ಇಲ್ಲ !’ಹಾಯ್ ಬೆಂಗಳೂರಿನಲ್ಲಿ ’ ಜೋಗಿ ’ಜಾನಕಿ ಅಂಕಣ ಬರೀತಾ ಅನಾಮಿಕರಾಗಿದ್ದ ಕಾಲದಲ್ಲಿ ,ಆರ್ಕುಟ್ ನಲ್ಲಿ ಹೀಗೆ ಒಂದು ಚರ್ಚೆ ಪ್ರಾರಂಭ ಆಗಿತ್ತು ’ಜಾನಕಿ ಯಾರು ?’ ಅಂತ .ನಾನೂ ತುಂಬಾ ಇಷ್ಟ ಪಟ್ಟು ಓದ್ತಾ ಇದ್ದೆ ’ಜಾನಕಿ ’ ಕಾಲಂ ನ. ಜಾನಕಿ ಅಂತ ಹೆಸರು ಇಟ್ಟಿದ್ರಿಂದ ಇದನ್ನು ಬರೆಯೋರು ಯಾರೋ ಹೆಂಗಸು ಅನ್ನೋ strong feeling ನಂದಾಗಿತ್ತು. ಬೇರೆಯವ್ರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ರು ಅಲ್ಲಿ.ಅವರಲ್ಲಿ ಯಾರೋ ಒಬ್ರು ಜಾನಕಿ ಬೇರೆ ಯಾರೂ ಅಲ್ಲ ಅದು ’ಜೋಗಿ’ ! ಅವರ ನಿಜ ಹೆಸರು ಗಿರೀಶ್ ರಾವ್ ಅಂತ ಬೇರೆ ಹೇಳಿದ್ರು.ದುರದೃಷ್ಟ ಅಂದ್ರೆ ನಂಗೆ ಆಗ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ .ಹಾಗಾಗಿ ನಂಗೆ ಆ ಉತ್ತರ ಸಮಂಜಸ ಅನ್ನಿಸಿರ್ಲಿಲ್ಲ.ನಂದೆಲ್ಲಿಡ್ಲಿ ಅನ್ನೋ ಹಾಗೆ ನಾನು, ’ ಜಾನಕಿ ಅನ್ನೋರು ಬಹುಷ ವೈದೇಹಿ ಇರಬಹುದೇನೋ ಅವರ ನಿಜ ಹೆಸರು ಜಾನಕಿ ಅಂತೆ ’ ಅಂದಿದ್ದೆ .ನನ್ನದು ಅಧಿಕ ಪ್ರಸಂಗವಾಗಿತ್ತು ಯಾಕಂದ್ರೆ ನಂಗೆ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ ,ಅದೂ ಅಲ್ಲದೆ ವೈದೇಹಿ ಯವರ ಬಗ್ಗೇನೂ ಜಾಸ್ತಿ ಗೊತ್ತಿರ್ಲಿಲ್ಲ :(ಇದಾದ ನಂತರ ಜೋಗಿಯವರು ’ಜೋಗಿ ಕಥೆಗಳು’ ಪ್ರಕಟಿಸಿದ ನಂತರ ’ಜಾನಕಿ’ ಯಾರು ಅನ್ನೋದು ಜಗಜ್ಜಾಹೀರಾಯ್ತು.ನನ್ನ ಹಾಗೆಯೇ ಜಾನಕಿಯ ಬಗ್ಗೆ ಬೇರೆಯವರ ಕಲ್ಪನೆಗಳೂ ಛಿದ್ರವಾದವಾ?????? ಯಾರಿಗೆ ಗೊತ್ತು!ಇದೇ ರೀತಿ ಈ ಹೊಸ ’ಅನಾಮಿಕ ’ ಬ್ಲಾಗಿಗರಿಗೆ ಒಂದು ದಿನ lime light ಗೆ ಬರುವ ಆಸೆ ಆದ್ರೆ ನಮ್ಮಂಥವರ ಗತಿ ಏನು? ನಮ್ಮ ಕಲ್ಪನೆಗಳ ರೆಕ್ಕೆ ಪುಕ್ಕ ಎಲ್ಲ ಮುರಿಯುವಾಗ ನೋವಾಗಲ್ವ?ಯಂಡಮೂರಿಯವರ’ ಬೆಳದಿಂಗಳ ಬಾಲೆ’ ಕೊನೆಯವರೆಗೆ ನಮಗೆ ಕಾಣೋದೆ ಇಲ್ಲ ! ಹಾಗಾಗಿಯೇ ನಂಗೆ ಅದು ಬಹಳ ಇಷ್ಟ ಆಯ್ತು !ಅದು ಬಿಟ್ಟು ಕೊನೆಗೆ ’ಛೆ ನಾನಂದು ಕೊಂಡ ಬೆಳದಿಂಗಳ ಬಾಲೆ ಇವಳಲ್ಲ ’-ಅನ್ನೋ conclusion ಗೆ ಬರೋದು ಎಂಥ ಯಾತನೆ ಅಲ್ವ?ಅದೂ ಅಲ್ಲದೇ ಅನಾಮಿಕರು ಅನಾಮಿಕರಾಗೇ ಉಳಿಯೋದು ಸಾಧ್ಯ ನಾ??ಹ್ಯಾರಿ ಪೋಟರ್ ಲೇಖಕಿ ಹೆಂಗಸು ಅಂತ ಗೊತ್ತಾಗಬಾರದು ಅಂತ ಪಾಪ ಪ್ರಕಾಶಕರು ಅವಳ ಹೆಸರನ್ನು ಶಾರ್ಟ್ ಫಾರ್ಮ್ ನಲ್ಲಿ ಬರೀತಾ ಇದ್ರಂತೆ . ಎಂಥ ಸಂಕಟ ಅಲ್ವ ಅವಳಿಗೆ?ಮೇರಿ ಭೀಗಿ ಭೀಗಿ ಸಿ ಪಲ್ಕೋಂ ಪೇ ರೆಹ್ ಗಯೆ,ಜೈಸೆ ಮೆರೆ ಸಪನೆ ಭಿಕರ್ ಕೇ ......................ಜಲೆ ಮನ್ ತೇರಾ ಭಿ ಕಿಸಿಕೆ ಮಿಲನ್ ಪರ್ ,ಅನಾಮಿಕಾ ತು ಭಿ ತರಸೇ .................................!!!
ಸಂದೀಪ್ ಕಾಮತ್ 

http://kadalateera.blogspot.in/2008/10/blog-post.html?m=1